ಭಾರತ
ಕ್ರೀಡೆ
ಫಿಫಾ ರ್ಯಾಂಕಿಂಗ್: 2 ಸ್ಥಾನ ಮೇಲೇರಿದ ಭಾರತ
ಫಿಫಾ ವಿಶ್ವ ರ್ಯಾಂಕಿಂಗ್ ಅಂಕ ಪಟ್ಟಿಯಲ್ಲಿ ಭಾರತ ಈ ಹಿಂದಿನ ವರ್ಷಕ್ಕಿಂತ 2 ಸ್ಥಾನ ಮೇಲಕ್ಕೇರುವ ಮೂಲಕ 135ನೇ ರ್ಯಾಂಕಿಂಗ್ ಪಡೆದುಕೊಂಡಿದೆ...
ನವದೆಹಲಿ: ಫಿಫಾ ವಿಶ್ವ ರ್ಯಾಂಕಿಂಗ್ ಅಂಕ ಪಟ್ಟಿಯಲ್ಲಿ ಭಾರತ ಈ ಹಿಂದಿನ ವರ್ಷಕ್ಕಿಂತ 2 ಸ್ಥಾನ ಮೇಲಕ್ಕೇರುವ ಮೂಲಕ 135ನೇ ರ್ಯಾಂಕಿಂಗ್ ಪಡೆದುಕೊಂಡಿದೆ.
ಕಳೆದ 6 ವರ್ಷಗಳಲ್ಲೇ ಭಾರತದ ಗರಿಷ್ಠ ರ್ಯಾಂಕಿಂಗ್ ಇದು ಎಂಬುದಷ್ಟೇ ಸಮಾಧಾನದ ವಿಷಯವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ಫುಟ್ಬಾಲ್ ತಂಡದ ಕೋಚ್ ಸ್ಟೆಫೆನ್ ಕಾಂಟಸ್ಟೈನ್, ಆಟಗಾರರ ಅತ್ಯುತ್ತಮ ಪ್ರದರ್ಶನದಿಂದಾಗಿಯೇ ಇದು ಸಾಧ್ಯವಾಗಿದೆ ಎಂದರು.
ಪಟ್ಟಿಯಲ್ಲಿ ಮೊದಲ 5 ಸ್ಥಾನದಲ್ಲಿ ಕ್ರಮವಾಗಿ ಅರ್ಜೇಂಟೀನಾ, ಬ್ರೆಜಿಲ್, ಜರ್ಮನಿ, ಚಿಲಿ ಮತ್ತು ಬೆಲ್ಜಿಯಂ ತಂಡಗಳಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ